ಖೊರಾಮಾಬಾದ್	-
	ಪಶ್ಚಿಮ ಇರಾನಿನಲ್ಲಿರುವ ಒಂದು ನಗರ. ಲುರಿಸ್ತಾನ್ ಪ್ರಾಂತ್ಯದ ಮುಖ್ಯ ಪಟ್ಟಣ. ಹ್ಯಾಮಡಾನಿನ ದಕ್ಷಿಣಕ್ಕೆ 90 ಮೈ. ದೂರದಲ್ಲಿ ಲುರಿಸ್ತಾನ್ ಪರ್ವತದಲ್ಲಿರುವ ನದೀಕಣಿವೆಯ ಇಕ್ಕಟ್ಟಾದ ಸ್ಥಳದಲ್ಲಿದೆ. ಖೂಜಿಸ್ತಾನದಿಂದ ಡೆeóïಫುಲ್ ಮತ್ತು ಬೊರುಜರ್ಡ್ ಮೂಲಕ ಪ್ರಸ್ಥಭೂಮಿಗೆ ಸಾಗುವ ಮಾರ್ಗ ಇಲ್ಲಿ ಹಾಯ್ದು ಹೋಗುವುದರಿಂದ ಆ ಮಾರ್ಗದ ಮೇಲೆ ಖೊರಾಮಾಬಾದ್ ಹತೋಟಿ ಹೊಂದಿದೆ. ಜನಸಂಖ್ಯೆ 38,806 (1956). 20ನೆಯ ಶತಮಾನದ ಆದಿಯಲ್ಲಿ ಇದರ ಜನಸಂಖ್ಯೆ ಕೇವಲ 8,500 ಇತ್ತು. ಇದು ಬೆಳೆಯುತ್ತಿರುವ ನಗರ. ಈಗಲೂ ಅಲೆಮಾರಿಗಳಾಗಿರುವ ಲುರ್ ಜನರಿಗೆ ಇದು ಬೇಸಗೆ ಮಾರುಕಟ್ಟೆ. ಖೊರಾಮಾಬಾದಿನ ಪೇಟೆಬೀದಿಗಳು ತುಂಬ ಲವಲವಿಕೆಯಿಂದ ಕೂಡಿರುತ್ತವೆ. ಅಲ್ಲೊಂದು ಬಲವಾದ ರಕ್ಷಕ ಸೈನ್ಯವಿದೆ. ಪಟ್ಟಣಕ್ಕೂ ನದಿಗೂ ನಡುವೆ ಇರುವ ಗುಡ್ಡದ ತಲೆಯ ಮೇಲೆ ಹಿಂದಣ ಗವರ್ನರ್‍ಗಳ ನಿವಾಸವಾಗಿದ್ದ ಡೆeóï-ಇ-ಸಿಯಾದ (ಕರಾಳಮಾರ್ಗ) ಅವಶೇಷಗಳಿವೆ. ಕುರ್ದಿಷ್ ಮುಖಂಡನೊಬ್ಬ 10ನೆಯ ಶತಮಾನದಲ್ಲಿ ಇದನ್ನು ಕಟ್ಟಿಸಿದ.      		(ಎಂ.ಎಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ